ವಿನೋದ -
	ಕೊರವಂಜಿಯ ಸಂಪಾದಕ ರಾ.ಶಿ. ಅವರ ಶುಭಾಶೀರ್ವಾದ ಪಡೆದು ಆರಂಭವಾದ ಹಾಸ್ಯಪ್ರಧಾನ ಮಾಸಪತ್ರಿಕೆ. ಬೆಂಗಳೂರಿನಿಂದ ಪ್ರಕಟವಾ ಗುತ್ತಿರುವ ಈ ಪತ್ರಿಕೆಯ ಸಂಪಾದಕರು ಆರಂಭದಿಂದಲೂ ದೇಶಹಳ್ಳಿ ಜಿ. ನಾರಾಯಣ ಅವರು. 1951ನೆಯ ಫೆಬ್ರವರಿ ತಿಂಗಳಲ್ಲಿ ಪ್ರಥಮ ಸಂಚಿಕೆ ಪ್ರಕಟವಾಯಿತು. ಡಿಮೈ ಅಷ್ಟದಳ ಆಕಾರದಲ್ಲಿದ್ದು, ಮೂವತ್ತಕ್ಕೂ ಹೆಚ್ಚು ಪುಟಗಳು ಇರುತ್ತವೆ. ಪ್ರತಿ ಆಗಸ್ಟ್ ತಿಂಗಳಲ್ಲಿ ಸುಮಾರು ಇನ್ನೂರು ಪುಟಗಳ ವಿಶೇಷ ಸಂಚಿಕೆ ಪ್ರಕಟವಾಗುತ್ತದೆ.

	ಈ ಪತ್ರಿಕೆಯ ಆಶ್ರಯದಲ್ಲಿ ವಾರ್ಷಿಕ ವಿನೋದ ಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ ಪತ್ರಿಕೆಯಲ್ಲಿ ಆಗಾಗ ಪ್ರಕಟವಾದ ಹಾಸ್ಯಲೇಖನಗಳ ಆಯ್ದ ಸಂಕಲನ ವಿನೋದಲಹರಿ ಮತ್ತು ಆಯ್ದ ವ್ಯಂಗ್ಯಚಿತ್ರಗಳ ಸಂಕಲನ ವಿನೋದವಾಹಿನಿ ಹಾಗೂ ವಿನೋದ ಚಿತ್ರ ಎಂಬ ಮೂರು ಕೃತಿಗಳನ್ನು ಪ್ರಕಟಿಸಲಾಗಿದೆ. 			
			(ಎ.ಆರ್.ಎಮ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ